ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಸ್ವಾವಲಂಬನೆ

ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ಕಾರ್ಪೊರೇಟ್ ಹೂಡಿಕೆ;
ಅಹಮದಾಬಾದ್ನಲ್ಲಿ ಸ್ಥಾಪನೆಯಾಗಲಿರುವ ಸೆಮಿಕಂಡಕ್ಟರ್ ತಯಾರಿಕಾ ಘಟಕ

ಏಳು ವರ್ಷಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾದ ಉಪಕ್ರಮವನ್ನು ಆರಂಭಿಸಿದಾಗ, ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಎಂದು
ಜನರು ಅಂದುಕೊಂಡಿದ್ದರು. ಆದರೆ ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಿಂದ ಆರಂಭವಾದ ಪಯಣದ ಫಲವೆಂದರೆ ಭಾರತೀಯ ಕಂಪನಿಗಳು 80 ಬಿಲಿಯನ್ ಅಂದರೆ 6 ಲಕ್ಷ ಕೋಟಿ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು
ತಯಾರಿಸುತ್ತಿವೆ. ಈಗ ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಸ್ವಾವಲಂಬನೆಯ ಸರದಿ. ಈ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಕೇಂದ್ರ ಸರ್ಕಾರವು 76 ಸಾವಿರ ಕೋಟಿ ರೂ.ಗಳ
ಮಹತ್ವಾಕಾಂಕ್ಷೆಯ ಭಾರತ ಸೆಮಿಕಂಡಕ್ಟರ್ ಮಿಷನ್ (ಐಎಸ್ಎಂ) ಅನ್ನು ಘೋಷಿಸಿದೆ ಮತ್ತು ಅನೇಕ ರಾಜ್ಯಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇದರ ಪರಿಣಾಮ ದೇಶದ
ಪ್ರಮುಖ ಗಣಿ ಕಂಪನಿ ವೇದಾಂತ, ತೈವಾನ್ನ ಫಾಕ್ಸಾಕಾನ್ಸ ಹಯೋಗದಲ್ಲಿ ಗುಜರಾತ್ನ ಅಹಮದಾಬಾದ್ನಲ್ಲಿ ದೊಡ್ಡ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲಿದೆ. ಇದಕ್ಕಾಗಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರ ಸಮ್ಮುಖದಲ್ಲಿ ಎರಡೂ ಕಂಪನಿಗಳು ಮತ್ತು ಗುಜರಾತ್ ಸರ್ಕಾರ ಎರಡು ಎಂಒಯುಗಳಿಗೆ ಸಹಿ ಹಾಕಿವೆ. ಇದರ ಅಡಿಯಲ್ಲಿ,

ಗುಜರಾತ್ನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸಲು ಎರಡೂ ಕಂಪನಿಗಳು 1,54,000 ಕೋಟಿ ರೂ. ಹೂಡಿಕೆ ಮಾಡಲಿವೆ. ಇದು ಬಹುಶಃ ಸ್ವಾತಂತ್ರ್ಯದ ನಂತರದ ಅತಿದೊಡ್ಡ
ಕಾರ್ಪೊರೇಟ್ ಹೂಡಿಕೆಯಾಗಿದೆ. ಸೆಮಿಕಂಡಕ್ಟರ್ ಯೋಜನೆ ಮತ್ತು ಡಿಸ್ಪ್ಲೇ ಫ್ಯಾಬ್ ಉತ್ಪಾದನಾ ಘಟಕದಲ್ಲಿ ಸುಮಾರು 1 ಲಕ್ಷ ಜನರು ಉದ್ಯೋಗ ಪಡೆಯುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *