1857 ರ ಭಾರತೀಯ ದಂಗೆಯನ್ನು ಬ್ರಿಟಿಷರು ಸಿಪಾಯಿ ದಂಗೆ ಎಂದು ಕರೆಯುತ್ತಾರೆ. 1885 ರಲ್ಲಿ ಭಾರತೀಯ ರಾಷ್ಟ್ರೀಯ ಚಳುವಳಿ ಒಕ್ಕೂಟ ರಚನೆಯಾಗಿದೆ. ಅಹಿಂಸಾ ಚಳುವಳಿಯ ನಾಯಕ ಮಹಾತ್ಮಗಾಂಧಿ, ಜವಾಹರಲಾಲ್ ನೆಹರು, ಕಾಂಗ್ರೆಸ್ ಸದಸ್ಯತ್ವದಿಂದ ನಾಯಕರು ಹೊರಹೊಮ್ಮಿದರು.
ರಾಷ್ಟ್ರೀಯ ಚಳುವಳಿಯ ಪ್ರಮುಖ ಘಟನೆಗಳನ್ನು ಕೂಡಾ ನಿವೆಲ್ಲರು ತಿಳಿದುಕೊಳ್ಳುವುದು ಸ್ಪರ್ಧಾತ್ಮಕ ಪರೀಕ್ಷೆಯ ಹಿತದೃಷ್ಟಿಯಿಂದ ತುಂಬಾ ಸಹಕಾರಿ
- 1904 – ಭಾರತೀಯ ವಿಶ್ವವಿದ್ಯಾಲಯಗಳ ಕಾಯಿದೆ ಜಾರಿ
- 1905 – ಬಂಗಾಳದ ವಿಭಜನೆ
- 1906 – ಮುಸ್ಲಿಂ ಲೀಗ್ ಸ್ಥಾಪನೆ
- 1907 – ಸೂರತ್ ಅಧಿವೇಶನ, ಕಾಂಗ್ರೆಸ್ ನಲ್ಲಿ ಒಡಕು
- 1911 – ಬ್ರಿಟಿಷ್ ಚಕ್ರವರ್ತಿಯ ದೆಹಲಿ ದರ್ಬಾರ್
- 1916 – ಹೋಮ್ ರೂಲ್ ಲೀಗ್ ರಚನೆ
- 1916 – ಮುಸ್ಲಿಂ ಲೀಗ್ – ಕಾಂಗ್ರೆಸ್ ಒಪ್ಪಂದ (ಲಕ್ನೋ ಒಪ್ಪಂದ)
- 1917 – ಮಹಾತ್ಮಾ ಗಾಂಧಿಯವರಿಂದ ಚಂಪಾರಣ್ ನಲ್ಲಿ ಚಳುವಳಿ
- 1919 – ಜಲಿಯನ್ ವಾಲಾಬಾಗ್ ಹತ್ಯಾಕಾಂಡ
- 1919 – ಖಿಲಾಫತ್ ಚಳುವಳಿ
- 1920 – ಅಸಹಕಾರ ಚಳುವಳಿ
- 1922 – ಚೌರಿ-ಚೌರ ಹಗರಣ
- 1927 – ಸೈಮನ್ ಆಯೋಗದ ನೇಮಕ
- 1928 – ಭಾರತಕ್ಕೆ ಸೈಮನ್ ಆಯೋಗದ ಆಗಮನ
- 1929 – ಭಗತ್ ಸಿಂಗ್ ರಿಂದ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಸ್ಪೋಟ