ಭಾರತ ಸಂವಿಧಾನವನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅತ್ಯವಶ್ಯಕ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್. ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಡಾ. ಬಾಬು ರಾಜೇಂದ್ರ ಪ್ರಸಾದ್. ಸಂವಿಧಾನವನ್ನು ಅಂಗೀಕರಿಸಿದ ದಿನಾಂಕ 26 ನವೆಂಬರ್ 1949, ಜಾರಿಯಾದ ದಿನಾಂಕ 26 ಜನವರಿ 1950. ಹಾಗೇಯೆ ನಾವು ಅವುಗಳ ವಿಧಿಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.
- 17ನೇ ವಿಧಿ:- ಅಸ್ಪೃಶ್ಯತೆ ನಿರ್ಮೂಲನೆ
- 21(A) ವಿಧಿ:- ಶಿಕ್ಷಣದ ಹಕ್ಕು
- 45ನೇ ವಿಧಿ:- ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ
- 51(ಎ) ವಿಧಿ:- ಮೂಲಭೂತ ಕರ್ತವ್ಯಗಳು
- 52 ನೇ ವಿಧಿ:- ಭಾರತದ ರಾಷ್ಟ್ರಪತಿಗಳ ನೇಮಕ
- 63 ನೇ ವಿಧಿ:- ಉಪರಾಷ್ಟ್ರಪತಿಗಳ ನೇಮಕ
- 72 ನೇ ವಿಧಿ:- ರಾಷ್ಟ್ರಪತಿಗಳಿಗಿರುವ ಕ್ಷಮಾಧಾನ ಅಧಿಕಾರ
- 112 ನೇ ವಿಧಿ:- ಕೇಂದ್ರ ವಾರ್ಷಿಕ ಮುಂಗಡ ಪತ್ರ
- 124ನೇ ವಿಧಿ:- ಸರ್ವೋಚ್ಚ ನ್ಯಾಯಾಲಯದ ರಚನೆ ಮತ್ತು ಸ್ಥಾಪನೆ
- 202 ನೇ ವಿಧಿ:- ರಾಜ್ಯ ವಾರ್ಷಿಕ ಮುಂಗಡ ಪತ್ರ
- 153 ನೇ ವಿಧಿ:- ರಾಜ್ಯಪಾಲರ ನೇಮಕ
- 214 ನೇ ವಿಧಿ:- ರಾಜ್ಯ ಉಚ್ಚ ನ್ಯಾಯಾಲಯಗಳ ಸ್ಥಾಪನೆ
- 280 ನೇ ವಿಧಿ:- ಕೇಂದ್ರ ಹಣಕಾಸು ಆಯೋಗ
- 324 ನೇ ವಿಧಿ:- ಚುನಾವಣಾ ಆಯೋಗ
- 352 ನೇ ವಿಧಿ:- ರಾಷ್ಟ್ರೀಯ ತುರ್ತು ಪರಿಸ್ಥಿತಿ
- 356 ನೇ ವಿಧಿ:- ರಾಜ್ಯ ತುರ್ತು ಪರಿಸ್ಥಿತಿ
- 360 ನೇ ವಿಧಿ:- ಹಣಕಾಸಿನ ತುರ್ತು ಪರಿಸ್ಥಿತಿ
- 368 ನೇ ವಿಧಿ:- ಸಂವಿಧಾನದ ತಿದ್ದುಪಡಿ