ಕೆಎಎಸ್ ಪರೀಕ್ಷೆಯ ತಯಾರಿ ವಿಧಾನಗಳು?How to prepare for KAS Exam in kannada?

ಕರ್ನಾಟಕದಲ್ಲಿ ಕೆಪಿಎಸ್‌ಸಿ ಅಥವಾ ಕರ್ನಾಟಕ ಲೋಕಸೇವಾ ಆಯೋಗವು ಸರ್ಕಾರದ ವಿವಿಧ ಇಲಾಖೆ ಸಚಿವಾಲಯಗಳಿಗೆ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ನೇಮಕಾತಿಗೆ ಕೆಎಎಸ್ ಪರೀಕ್ಷೆ ಅಥವಾ ಗೆಜಿಟೇಡ್ ಪ್ರೊಬೇಷನರ್ ಪರೀಕ್ಷೆಗಳನ್ನು ನಡೆಸುತ್ತದೆ. ಕೆಎಎಸ್ ಪರೀಕ್ಷೆಯು  ಮೂರು ಹಂತದ ಪರೀಕ್ಷೆಗಳನ್ನು ಒಳಗೊಂಡಿದ್ದು ಇದರ ಮಾಹಿತಿಯನ್ನು ಸವಿವರವಾಗಿ ನೀಡಲಾಗಿದೆ.

 

ಕೆಎಎಸ್ ಪರೀಕ್ಷೆಯಲ್ಲಿ ಮುಖ್ಯವಾಗಿ ಮೂರು ಹಂತದ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ

ಪೂರ್ವಭಾವಿ ಪರೀಕ್ಷೆ :- ಈ ಪರೀಕ್ಷೆಯಲ್ಲಿ 2 ಪತ್ರಿಕೆಗಳಿದ್ದು, 400 ಅಂಕಗಳನ್ನು ಒಳಗೊಂಡ ಪರೀಕ್ಷೆಯಾಗಿದೆ.

 

ಮುಖ್ಯ ಪರೀಕ್ಷೆ :-2 ಕಡ್ಡಾಯ ಪತ್ರಿಕೆಗಳು,5 ಐಚ್ಚಿಕ ಪತ್ರಿಕೆಗಳು

 

ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ):-50 ಅಂಕಗಳಿಗೆ ನೀಡಲಾಗುತ್ತದೆ

 

1.ಪೂರ್ವಭಾವಿ ಪರೀಕ್ಷೆ ಕುರಿತು

ಪೂರ್ವಭಾವಿ ಪರೀಕ್ಷೆ 2 ಕಡ್ಡಾಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ

ಪತ್ರಿಕೆ 1:- ಸಾಮಾನ್ಯ ಅಧ್ಯಯನ

ಪತ್ರಿಕೆ 2:- ಸಾಮಾನ್ಯ ಅಧ್ಯಯನ

ಎರಡು ಪತ್ರಿಕೆಗಳು ಸಹ ಸಾಮಾನ್ಯ ಅಧ್ಯಯನ ಪತ್ರಿಕೆಗಳಾಗಿದ್ದು, ಅಂದರೆ ಪಠ್ಯಕ್ರಮ ಬೇರೆ ಇರುತ್ತದೆ. 200 ಅಂಕಗಳನ್ನು ಒಳಗೊಂಡ ಪತ್ರಿಕೆಗಳು ಇವುಗಳಾಗಿವೆ.100 ಪ್ರಶ್ನೆಗಳು ಇರಲಿದ್ದು. ಪ್ರತಿ ಪ್ರಶ್ನೆಗೆ 2 ಅಂಕಗಳನ್ನು ನೀಡಲಾಗುತ್ತದೆ. ಪ್ರತಿಯೊಂದು ಪತ್ರಿಕೆಗೂ 2 ಗಂಟೆ ಕಲಾ ಕಾಲಾವಕಾಶ ಇರುತ್ತದೆ. ಸಾಮಾನ್ಯವಾಗಿ ಎರಡು ಪರೀಕ್ಷೆಗಳು ಒಂದೇ ದಿನ ನಡೆಯುತ್ತದೆ.ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ.ಪತ್ರಿಕೆ-2 ವಸ್ತುನಿಷ್ಠ ಮಾದರಿಯಲ್ಲಿರುತ್ತದೆ.

ಪೂರ್ವಭಾವಿ ಪರೀಕ್ಷೆ ಪತ್ರಿಕೆ -1 ಪಠ್ಯಕ್ರಮ

ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ಪತ್ರಿಕೆ ಒಂದರ ಪಠ್ಯಕ್ರಮ ಈ ಕೆಳಗಿನಂತಿದೆ.

ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಾಮುಖ್ಯತೆಯನ್ನು ಒಳಗೊಂಡ ಪ್ರಚಲಿತ ವಿದ್ಯಮಾನಗಳು,ಭಾರತದ ಇತಿಹಾಸ, ರಾಜ್ಯಶಾಸ್ತ್ರ, ಭೋಗೋಳಶಾಸ್ತ್ರ, ಆರ್ಥಿಕತೆ, ಭಾರತದ ರಾಷ್ಟ್ರೀಯ ಚಳುವಳಿಯನ್ನು ಒಳಗೊಂಡಿರುತ್ತದೆ. ಈ ಪ್ರಶ್ನೆ ಪತ್ರಿಕೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೀಡಲಾಗುತ್ತದೆ.

 

ಪೂರ್ವಭಾವಿ ಪರೀಕ್ಷೆ ಪತ್ರಿಕೆ- 2 ಪಠ್ಯಕ್ರಮ 

ರಾಜ್ಯದ ಪ್ರಚಲಿತ ಘಟನೆಗಳು, ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ,ಪರಿಸರ ಅಧ್ಯಯನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

 

2.ಮುಖ್ಯ ಪರೀಕ್ಷೆ ಕುರಿತು ಮಾಹಿತಿ :-

ಕೆಪಿಎಸ್‌ಸಿ  ಕೆಎಎಸ್ ಪರೀಕ್ಷೆಯಲ್ಲಿನ ಐಚ್ಚಿಕ  ವಿಷಯಗಳ ಪತ್ರಿಕೆ 6 ಮತ್ತು 7 ಅನ್ನು ಕೈ ಬಿಡಲಾಗಿದೆ. ಒಟ್ಟು 1750 ಅಂಕಗಳಿಗೆ ನಡೆಸಲಾಗುತ್ತಿದ್ದು ಮುಖ್ಯ ಪರೀಕ್ಷೆಯನ್ನು 1250 ಅಂಕಗಳಿಗೆ ನಡೆಸಲು 2020ರಲ್ಲಿ ತೀರ್ಮಾನಿಸಲಾಗಿದೆ. ಹಾಗೂ 200 ಅಂಕಗಳಿಗೆ ನಡೆಸಲಾಗುತ್ತಿದ್ದ ವ್ಯಕ್ತಿತ್ವ ಪರೀಕ್ಷೆಯನ್ನು ಅಥವಾ ಸಂದರ್ಶನವನ್ನು 50 ಅಂಕಗಳಿಗೆ ಇಳಿಸಲಾಗಿದೆ.

ಮುಖ್ಯ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಪ್ರತಿ ಪ್ರಶ್ನೆ ಪತ್ರಿಕೆಯು 150 ಅಂಕಗಳನ್ನು ಒಳಗೊಂಡಿರುತ್ತದೆ. ಈ ಪತ್ರಿಕೆಯಲ್ಲಿ ಶೇಕಡ 35 ಅಂಕಗಳನ್ನು ಗಳಿಸಿದರೆ ಸಾಕು. ಈ ಎರಡು ಪತ್ರಿಕೆಗಳಲ್ಲಿ ನಿಗದಿತ ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಇತರೆ ಪತ್ರಿಕೆಗಳಲ್ಲಿ ಎಷ್ಟೇ ಹೆಚ್ಚು ಅಂಕಗಳನ್ನು ಗಳಿಸಿದರು ವ್ಯಕ್ತಿತ್ವ ಪರೀಕ್ಷೆಗೆ ಅಥವಾ ಸಂದರ್ಶನಕ್ಕೆ ಅರ್ಹರಾಗಿರುವುದಿಲ್ಲ .

ಮುಖ್ಯ ಪರೀಕ್ಷೆ ಪತ್ರಿಕೆಗಳು ಮತ್ತು ಅಂಕಗಳು

ಮುಖ್ಯ ಪರೀಕ್ಷೆಯ ಅರ್ಹತಾ ಪತ್ರಿಕೆಗಳು

1. ಕನ್ನಡ : 150 ಅಂಕಗಳು ( ಪರೀಕ್ಷಾ ಅವಧಿ 2 ಗಂಟೆ )

2. ಇಂಗ್ಲಿಷ್  : 150 ಅಂಕಗಳು ( ಪರೀಕ್ಷೆ ಅವಧಿ 2 ಗಂಟೆ )

ಇತರೆ ಪತ್ರಿಕೆಗಳು:-

ಪತ್ರಿಕೆ -1 : ಪ್ರಬಂಧಗಳು  –  (250 ಅಂಕಗಳು)

ಪತ್ರಿಕೆ -2 : ಸಾಮಾನ್ಯ ಅಧ್ಯಯನ -1  (250 ಅಂಕಗಳು)

ಪತ್ರಿಕೆ -3 : ಸಾಮಾನ್ಯ ಅಧ್ಯಯನ -2  (250 ಅಂಕಗಳು)

ಪತ್ರಿಕೆ -4 : ಸಾಮಾನ್ಯ ಅಧ್ಯಯನ -3 ( 250 ಅಂಕಗಳು)

ಪತ್ರಿಕೆ -5 : ಸಾಮಾನ್ಯ ಅಧ್ಯಯನ -4  (250 ಅಂಕಗಳು )

3.ವ್ಯಕ್ತಿತ್ವ ಪರೀಕ್ಷೆ ಅಥವಾ ಸಂದರ್ಶನ  50 ಅಂಕಗಳಿಗೆ ನಡೆಸಲಾಗುತ್ತದೆ.

ಎರಡು ಪತ್ರಿಕೆಗಳು ಸಹ ಸಾಮಾನ್ಯ ಅಧ್ಯಯನ ಪತ್ರಿಕೆಗಳಾಗಿದ್ದು, ಅಂದರೆ ಪಠ್ಯಕ್ರಮ ಬೇರೆ ಇರುತ್ತದೆ. 200 ಅಂಕಗಳನ್ನು ಒಳಗೊಂಡ ಪತ್ರಿಕೆಗಳು ಇವುಗಳಾಗಿವೆ.100 ಪ್ರಶ್ನೆಗಳು ಇರಲಿದ್ದು. ಪ್ರತಿ ಪ್ರಶ್ನೆಗೆ 2 ಅಂಕಗಳನ್ನು ನೀಡಲಾಗುತ್ತದೆ. ಪ್ರತಿಯೊಂದು ಪತ್ರಿಕೆಗೂ 2 ಗಂಟೆ ಕಲಾ ಕಾಲಾವಕಾಶ ಇರುತ್ತದೆ. ಸಾಮಾನ್ಯವಾಗಿ ಎರಡು ಪರೀಕ್ಷೆಗಳು ಒಂದೇ ದಿನ ನಡೆಯುತ್ತದೆ.ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ.ಪತ್ರಿಕೆ-2 ವಸ್ತುನಿಷ್ಠ ಮಾದರಿಯಲ್ಲಿರುತ್ತದೆ.

 

 

 

 

Leave a Reply

Your email address will not be published. Required fields are marked *