ನಿಮಗೆಲ್ಲರಿಗೂ ಸ್ವಾಗತ, ಈ ಬಾರಿ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಬಹುಮತ ಸರ್ಕಾರವನ್ನು ರಚನೆ ಮಾಡುತ್ತಿದ್ದು, ಇದೀಗ ಜನಸಾಮನ್ಯರಿಗೆ ಕಾಂಗ್ರೇಸ್ ಕೊಟ್ಟಿರುವ 5 ಹೇಳಿಕೆಗಳನ್ನು ನೀಡಿದ್ದು, ಇಂತಹ 5 ಯೋಜನೆಗಳನ್ನು ಜಾರಿಗೆ ತರಬೇಕೆಂದು ಕಾಂಗ್ರೇಸ್ ಸರ್ಕಾರ ತಿಳಿಸಿದೆ. ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಫೂರ್ಣವಾಗಿ ನಮ್ಮ ಲೇಖನವನ್ನು ಓದಿ.
2023 ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಈಗಾಗಲೇ ಜನಸಾಮನ್ಯರಿಗೆ 5 ಯೋಜನೆಗಳನ್ನು ಗ್ಯಾರಂಟಿ ನೀಡಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಮಾಹಿತಿ ತಿಳಿಸಿದ್ದಾರೆ. ಈ ಯೋಜನೆಗಳನ್ನು ಜಾರಿಗೆ ಮಾಡುವ ಕುರಿತು ಮಾತನಾಡಿದ್ದಾರೆ. ಈ ಬಾರಿ ಕಾಂಗ್ರೇಸ್ ಪಕ್ಷವು ಎಲ್ಲಾ ಜಾತಿ ಧರ್ಮದ ಮತಗಳು ಬಂದಿವೆ. ಕಾಂಗ್ರೇಸ್ ಪಕ್ಷವು ಒಂದು ಜ್ಯಾತ್ಯಾತೀತ ಪಕ್ಷ ಎಂಬುದು ಸಾಬೀತಾಗಿದೆ. ಎಲ್ಲಾ ವರ್ಗದವರು ಮತ ಹಾಕಿದ್ದಾರೆ. ಅದರಿಂದ ನಮಗೆ 5 ವರ್ಷ ಕೊಟ್ಟಿರುವ ಅವಕಾಶವನ್ನು ನಾವು ಬಳಸಿಕೊಂಡು ಜನಪರ ಸೇವೆಯನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.
1. ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ
2. ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ 3 ತಿಂಗಳಿಗೆ 2 ಸಾವಿರ ಉಚಿತ, ಬೆಲೆ ಏರಿಕೆಯಿಂದ ತತ್ತರಿಸಿದ ರಾಜ್ಯದ ಮಹಿಳೆಯರಿಗೆ ಇದು ಅನುಕೂಲವಾಗಲಿದೆ.
3. ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದು.
4. ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಬಸ್‌ನಲ್ಲಿ ಉಚಿತವಾಗಿ ಸರ್ಕಾರಿ ಬಸ್ನಲ್ಲಿ ಪ್ರಯಾಣ ಮಾಡಲು ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ.
5. ಎಲ್ಲಾ ನಿರುದ್ಯೋಗ ಯುವಕ – ಯುವತಿಯರಿಗೆ, ಪ್ರತಿ ತಿಂಗಳು ನಿರುದ್ಯೊಗ ಭತ್ಯೆಯಂತೆ 3 ಸಾವಿರ ಪದವೀಧರರಿಗೆ, 1500 ಡಿಪ್ಲೋಮಾ ಪದವೀಧರರಿಗೆ ಕಾಂಗ್ರೇಸ್ ಸರ್ಕಾರವು ಈ ಹಿಂದೆ ನಮ್ಮ ಸರ್ಕಾರವು ಬಂದರೆ ಈ 5 ಯೋಜನೆಗಳನ್ನು ಜಾರಿ ಮಾಡುತ್ತದೆ ಎಂದು ಜನಸಾಮಾನ್ಯರಿಗೆ ಮಾತು ಕೊಟ್ಟಿದ್ದರು.
ಅದೇ ರೀತಿ ಬಹುಮತದ ಕಾಂಗ್ರೇಸ್ ಸರ್ಕಾರ ನಮ್ಮ ಕರ್ನಾಟಕದಲ್ಲಿ ಬಂದಿದ್ದು, ಹೀಗಾಗಿ ಈ ಯೋಜನೆಗಳನ್ನು ಅತಿ ಶೀಘ್ರದಲ್ಲಿಯೇ ಕಾಂಗ್ರೇಸ್ ಸರ್ಕಾರದ ಮೊದಲನೇ ಕ್ಯಾಬಿನೆಟ್‌ನಲ್ಲಿಯೇ ಅವುಗಳನ್ನು ಒಪ್ಪಿಗೆ ಕೊಟ್ಟು ಆದೇಶ ಹೊರಡಿಸುತ್ತೇವೆ ಎಂದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಈ ಯೋಜನೆಯನ್ನು ಹೇಗೆ ಪಡೆಯುವುದು :
2023 ರ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಸರ್ಕಾರ ಬಂದಿದ್ದು, ಇಂದು ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ಅವರ ನಡುವೆ ಪೈಪೋಟಿ ನಡೆಯುತ್ತಿದೆ. ಇಂದು ಸಿಎಂ ಯಾರು ಎಂದು ಘೋಷಣೆ ಆಗುತ್ತದೆ, ನಂತರದಲ್ಲಿ ಕಾಂಗ್ರೇಸ್ ಸರ್ಕಾರ ಜನಸಾಮಾನ್ಯರಿಗೆ ಕೊಟ್ಟಂತಹ ಆಶ್ವಾಸನೆಯನ್ನು ಕ್ಯಾಬಿನೆಟ್‌ನಲ್ಲಿ ಜಾರಿಗೆ ತರಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಯೋಜನೆಗಳ ಲಾಭವನ್ನು ಹೇಗೆ ಪಡೆಯುವುದು ಎಂಬುದನ್ನು ನಾವು ಸರ್ಕಾರ ತಿಳಿಸಿದ ನಂತರದಲ್ಲಿ ನಮ್ಮ ಮುಂದಿನ ಲೇಖನದಲ್ಲಿ ವಿವರವಾಗಿ ತಿಳಿಸುತ್ತೇವೆ,